ಪಬ್ಜಿ ಆಡಿ ಬರುತ್ತೇನೆಂದು ಮನೆಯಲ್ಲಿ ಹೇಳಿ ಹೊರ ಹೋಗಿದ್ದ ಬಾಲಕನೊಬ್ಬ ಶವವಾಗಿ ಪತ್ತೆಯಾದ ಘಟನೆ ಉಳ್ಳಾಲದ ಕೆ.ಸಿ. ರೋಡ್ ನಲ್ಲಿ ನಡೆದಿದೆ.
ಮೈದಾನವೊಂದರ ಮೂಲೆಯಲ್ಲಿ 12ವರ್ಷದ ಬಾಲಕನ ಶವ ಪತ್ತೆಯಾಗಿದ್ದು, ಮೇಲ್ನೋಟಕ್ಕೆ ಇದು ಕೊಲೆ ಎಂಬ ಸಂಶಯ ಪೊಲೀಸರಿಗೆ ವ್ಯಕ್ತವಾಗಿದೆ. ಕೆ.ಸಿ. ರೋಡ್ ನಿವಾಸಿ 12ವರ್ಷದ ಹಕೀಫ್ ಶನಿವಾರ ರಾತ್ರಿ 9 ಗಂಟೆಗೆ ಗೆಳೆಯರೊಂದಿಗೆ ಪಬ್ಜಿ ಆಟವಾಡಿ ಬರುತ್ತೇನೆಂದು ಮನೆಯಲ್ಲಿ ಹೇಳಿ ಹೊರ ಹೋಗಿದ್ದಾನೆ.
ತಡರಾತ್ರಿಯಾದರೂ ಪುತ್ರ ಬಾರದ ಕಾರಣ ಪೋಷಕರು ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದಾರೆ. ಕೂಡಲೇ ಪೊಲೀಸ್ ತಂಡ ರಾತ್ರಿಯಿಡೀ ಶೋಧ ಕಾರ್ಯ ಆರಂಭಿಸಿ ನಾನಾ ಕಡೆ ಹುಡುಕಾಟ ನಡೆಸಿದರೂ ಹಕೀಫ್ ಪತ್ತೆಯಾಗಿರಲಿಲ್ಲ.
ಭಾನುವಾರ ಬೆಳಗ್ಗೆ ಕೆ.ಸಿ. ರೋಡ್ ಮೈದಾನದ ಒಂದು ಮೂಲೆಯಲ್ಲಿ ಬಾಲಕನ ದೇಹ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದೆ. ತಲೆಯ ಮೇಲೆ ಕಲ್ಲಿನಿಂದ ಜಜ್ಜಿದ ಗಾಯವಿದೆ. ಮೃತದೇಹವನ್ನು ತರಗೆಲೆಯಿಂದ ಮುಚ್ಚಿ ಬಚ್ಚಿಡುವ ಪ್ರಯತ್ನ ಮಾಡಲಾಗಿತ್ತು ಎಂದು ಹೇಳಲಾಗುತ್ತಿದೆ.
Comments
Post a Comment